Index   ವಚನ - 564    Search  
 
ನೋಟವಾಗದ ಮುನ್ನ ಬೇಟವಾಯಿತ್ತು. ಬೇಟವಾಗದ ಮುನ್ನ ಕೂಟವಾಯಿತ್ತು. ಕೂಟವಾಗದ ಮುನ್ನ ಬಸುರಾಯಿತ್ತಯ್ಯ. ಬೇನೆ ತೋರದ ಮುನ್ನ ಬೆಸನಾಯಿತ್ತಯ್ಯ. ಬೆಸಲಾದ ಶಿಶುವೆದ್ದು ತಂದೆಯನಪ್ಪಲು ಪಶುಪತಿ ಐಕ್ಯವಾದುದು ಸೋಜಿಗವಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.