Index   ವಚನ - 590    Search  
 
ಕಾಯದೊಳಗಣ ಜೀವ ಹೇಂಗಿಪ್ಪುದೆಂದಡೆ: ಒಳಗೊಂದು ಬೆಳಗುವ ಜ್ಯೋತಿಯಂತಪ್ಪುದಯ್ಯ. ಕಾಯವೇ ಶರಣ, ಜೀವವೇ ಲಿಂಗವೆಂಬ ಉಪಾಯವನಾರೂ ತಿಳಿಯರಲ್ಲಾ. ಜೀವನ ಬೆಳಗು ಕಾಯವ ನುಂಗಲು ಕಾಯ ನಿರವಯವಾಯಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.