Index   ವಚನ - 592    Search  
 
ಊರೊಳಗೆ ಆರುಮಂಟಪವ ಕಂಡೆನು. ಐವತ್ತೆರಡು ಎಸಳಿಂದ ರಚಿಸುತ್ತಿಪ್ಪುದಯ್ಯ. ಎಸಳೆಸಳು ತಪ್ಪದೆ ಅಕ್ಷರ ಲಿಪಿಯನೇ ಕಂಡು ಅಕ್ಷರ ಲಿಪಿಯ ಹೆಸರ ಕಲ್ಪಿತ ಲಿಪಿಯನೇ ತೊಡೆದು ನಿರ್ವಿಕಲ್ಪ ನಿತ್ಯಾತ್ಮಕನಾದೆನಯ್ಯ. ಆರು ಮಂಟಪವನಳಿದುಮೂರು ಕೋಣೆಯ ಕೆಡಿಸಿ ಸಾವಿರೆಸಳ ಮಂಟಪವ ಹೊಗಲಾಗಿ ಸಾವು ತಪ್ಪುವುದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.