Index   ವಚನ - 597    Search  
 
ಚಿತ್ತದೊಳಗಣ ವಸ್ತು ಮುತ್ತಿನಂತಿಪ್ಪುದಯ್ಯ. ಚಿತ್ತೇ ಚಿಪ್ಪು, ಮುತ್ತೇ ವಸ್ತುವೆಂಬ ಯುಕ್ತಿಯನಾರೂ ತಿಳಿಯರಲ್ಲಾ. ಚಿಪ್ಪಳಿದು ಮುತ್ತ ಬೆರೆಸಲಾಗಿ ನಿತ್ಯತ್ವ ಪದವಾಯಿತ್ತೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.