Index   ವಚನ - 602    Search  
 
ಪಿಂಡ ಬ್ರಹ್ಮಾಂಡವನು ಕಂಡು ನುಂಗಿದ ಆಕೆ ಪಿಂಡ ಬ್ರಹ್ಮಾಂಡದ ಪ್ರಪಂಚ ಸೋಂಕಳು ನೋಡಾ. ಪಿಂಡ ಬ್ರಹ್ಮಾಂಡದ ಒಳಹೊರಗೆ ತಾನಾಗಿ ಅಖಂಡಿತನ ನೆರೆದು ಅಚ್ಚಲಿಂಗೈಕ್ಯಳಾದಳು ನೋಡಾ. ಇದು ಶರಣಸತಿ ಲಿಂಗಪತಿಯ ಸಂಯೋಗವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.