Index   ವಚನ - 605    Search  
 
ಪರಶಕ್ತಿ ಬಂದು ಪಶುಪತಿಯ ನೆರೆಯಲು ಅತಿಶಯನೊಬ್ಬ ಉದಯವಾದನು. ಆತ ಆದಿ ಶರಣನು. ಪಶು ಪಾಶ, ಮಲ ಮಾಯ ಕರ್ಮವನೆಂದೆಂದೂ ಹೊದ್ದದ ಅನಾದಿ ನಿರ್ಮಲನು ನೋಡಾ ಲಿಂಗ ಶರಣನು. ಆದಿ ಅನಾದಿಯಿಂದತ್ತತ್ತ ತಾನಾದ ಪರಾಪರನು ನಿಜಲಿಂಗೈಕ್ಯನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.