Index   ವಚನ - 607    Search  
 
ಆರೆಂಬ ಸಂಖ್ಯೆ ಆರೂ ಇಲ್ಲದ ರಾಜ್ಯದಿ ಮಾರಾರಿಯೊಬ್ಬನೇ ಅರಸು ನೋಡಾ. ಅರಸು ಪ್ರಧಾನಿ ಮಂತ್ರಿ ಆನೆ ಸೇನೆ ಪ್ರಜೆ ಪರಿವಾರವೆಲ್ಲವು ಸತ್ತು ಅರಸಿನ ಅರಸುತನ ಕೆಟ್ಟಿತ್ತು ನೋಡಾ. ತನ್ನಿಂದನ್ಯವಾಗಿ ಇನ್ನಾರೂ ಆರೂ ಏನುಯೇನೂ ಇಲ್ಲದ ನಿರಾಕಾರವ ನೆರೆದು ಆ ನಿರಾಕಾರ ಪರವಸ್ತುವೆಯಾದನಾಗಿ, ಅದು ಲಿಂಗಾಂಗ ಸಂಯೋಗ ಕಾಣಾ, ಮಹಾಲಿಂಗುಗುರು ಶಿವಸಿದ್ಧೇಶ್ವರ ಪ್ರಭುವೇ.