Index   ವಚನ - 611    Search  
 
ಶರೀರಾವರಣವಿಲ್ಲದ ಚಿದಾವರಣನ ಕರಣಂಗಳೆಲ್ಲ ಚಿತ್ಕರಣಂಗಳು ನೋಡಾ. ಆತಂಗೆ ಶರೀರ ಚಿದ್ಭೂಮಿ ಚಿಜ್ಜಲ ಚಿದಗ್ನಿ ಚಿತ್ಪ್ರಾಣವಾಯು ಚಿದಾಕಾಶಮಯ ನೋಡಾ. ಆ ಚಿದಾಭರಣಂಗೆ ಚಿಚೈತನ್ಯವೇ ಪ್ರಾಣಲಿಂಗ ನೋಡಾ. ಆ ಚಿದಾಭರಣ ಶರಣನು ಚಿದ್ಘನಲಿಂಗವ ನೆರೆದು ಪರಾಪರನಾದ ಪರಶಿವಯೋಗಿ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.