ಆರಾರರಿಂದ ಮೀರಿ ತೋರುವ[ಸೀಮೆ] ನಿಸ್ಸೀಮೆ ನೋಡ.
ಆ ಸೀಮೆಯರಸು ಅನಾಹತನು.
ಆವ ಆವರಣವೂ ಇಲ್ಲದ ನಿರಾವರಣಂಗೆ
ಮಾಯಾವರಣವಿಲ್ಲದ ನಿರ್ಮಾಯನೆ ಅಂಗವಾಗಿಪ್ಪನು.
ಈ ಲಿಂಗಾಂಗ ಸಂಯೋಗವ ತತ್ವಮಸ್ಯಾದಿ ವಾಕ್ಯಾರ್ಥವೆಂಬ
ವಾಚಾಳಿಗೆ ತಂದು ಹೇಳಲಿಲ್ಲ ವಾಚಾತೀತನಾದ ಶಿವೈಕ್ಯ[ನ]ನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Ārārarinda mīri tōruva[sīme] nis'sīme nōḍa.
Ā sīmeyarasu anāhatanu.
Āva āvaraṇavū illada nirāvaraṇaṅge
māyāvaraṇavillada nirmāyane aṅgavāgippanu.
Ī liṅgāṅga sanyōgava tatvamasyādi vākyārthavemba
vācāḷige tandu hēḷalilla vācātītanāda śivaikya[na]nu,
mahāliṅgaguru śivasid'dhēśvara prabhuvē.