Index   ವಚನ - 632    Search  
 
ಮೂರೊಂದಾದ ಕಿಚ್ಚು ಧಾರಿಣಿಯೆಲ್ಲವ ಸುಡುವುದ ಕಂಡೆ. ಧರೆಯ ಮೇಲಣ ಮನುಜರು ಉರಿಯ ಬೀಜವ ಪವಣಿಗೆಯ ಮಾಡಿ ಶರೀರವನಳಿದು ಸದಾಶಿವ ಸದಾಶಿವಯೆನುತ್ತ ಮನುಜತ್ವವಳಿದು ದೇವನಾದುದ ಕಂಡು ಇದ ಶಿವಜೀವೈಕ್ಯವೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.