Index   ವಚನ - 636    Search  
 
ನಿತ್ಯನಿರಂಜನನಾದ ಪರಶಿವನು ಲಿಂಗ ಜಂಗಮ ಭಕ್ತನೆಂದು ಮೂರು ತೆರನಾದನು ನೋಡಿರೇ. ಸದ್ರೂಪು ಲಿಂಗ, ಚಿದ್ರೂಪು ಭಕ್ತ, ಆನಂದ ಸ್ವರೂಪವೇ ಜಂಗಮ ನೋಡಾ. ಆ ಚಿತ್‍ಸ್ವರೂಪವಪ್ಪ ಭಕ್ತಂಗೆ ಸತ್‍ಸ್ವರೂಪವಪ್ಪ ಲಿಂಗವೇ ಅಂಗ; ಆನಂದಸ್ವರೂಪವಪ್ಪ ಜಂಗಮವೇ ಪ್ರಾಣ. ಇದು ಕಾರಣ, ಲಿಂಗವೆ ಅಂಗ, ಜಂಗಮವೆ ಪ್ರಾಣಗ್ರಾಹಕನಾದ ಚಿನ್ಮಯನಯ್ಯ ಭಕ್ತನು. ಲಿಂಗ ಜಂಗಮ ಭಕ್ತ ಮೂರುವೊಂದಾಗಿ ಪರಶಿವತತ್ವದಲ್ಲಡಗಿದ ಅದ್ವೈತ ಪರಬ್ರಹ್ಮವು ತಾನೇ ಪರಮಭಕ್ತ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ