Index   ವಚನ - 647    Search  
 
ಲಿಂಗಮಧ್ಯೇ ಜಗತ್ ಸರ್ವಂ ಎಂದುದಾಗಿ- ಜಗವ ಹೊರಗಿರಿಸಿ, ಲಿಂಗವನೊಳಗಿರಿಸಿಕೊಂಡು ಲಿಂಗ ಪ್ರೇಮಿಯಾದ ನಿರುತನು ಜಗ ತೋರುವಲ್ಲಿಯೂ ಅಡಗುವಲ್ಲಿಯೂ ತೋರಿಯಡಗದೆ ಅನುಪಮಮಹಿಮನಯ್ಯ, ಮಹೇಶ್ವರನು. ಜಗದ ಒಳಹೊರಗೆ ಸರ್ವ ವ್ಯಾಪಕನಾದ ಪರಿಪೂರ್ಣ ಸರ್ವಗತನಯ್ಯ ಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.