Index   ವಚನ - 669    Search  
 
ಒಬ್ಬರುತ್ತಮರೆಂಬರು. ಒಬ್ಬರು ಮಧ್ಯಮರೆಂಬರು. ಒಬ್ಬರು ಕನಿಷ್ಠರೆಂಬರು. ಒಬ್ಬರಧಮರೆಂಬರು. ಒಬ್ಬರು ಕಷ್ಟ ನಿಷ್ಠೂರಿಗಳೆಂಬರು. ಎಂದರದಕೇನು ಯೋಗಿಗೆ ವಿನಯ ಕಂಟಕವಲ್ಲದೆ. ಲೋಕಾರ್ಥಕ್ಕೂ ಪರಮಾರ್ಥಕ್ಕೂ ವಿರುದ್ಧ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.