Index   ವಚನ - 672    Search  
 
ಕಿಚ್ಚಿಗೂ ನೀರಿಗೂ ಏಕತ್ವವುಂಟೆ? ಗಾಳಿಗೂ ಧೂಳಿಗೂ ಏಕತ್ವವುಂಟೆ? ಭೂಮಿಗೂ ಆಕಾಶಕ್ಕೂ ಏಕತ್ವವುಂಟೆ? ನೀರಿಗೂ ನೆಳಲಿಗೂ ಏಕತ್ವವುಂಟೆ? ಕನ್ನಡಿಗೂ ಪ್ರತಿಬಿಂಬಕ್ಕೂ ಏಕತ್ವವುಂಟೆ? ತಮಕ್ಕೂ ಬೆಳಕಿಗೂ ಏಕತ್ವವುಂಟೆ? ಪ್ರಾಣ ಪರತತ್ವದಲ್ಲಡಗಿದ ಪ್ರಾಣಲಿಂಗೈಕ್ಯಂಗೆ, ಪ್ರಪಂಚಿನ ಹೊದ್ದಿಗೆಯುಂಟೆ ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.