Index   ವಚನ - 674    Search  
 
ಅಕ್ಕನ ತಮ್ಮನ ಸಂಗದಿಂದ ಹೆತ್ತವ್ವೆ ಹುಟ್ಟಿದಳು ನೋಡಾ. ಹೆತ್ತವ್ವೆ ಹುಟ್ಟಲು ಅಕ್ಕನು ತಮ್ಮನು ಅಳಿದರು ನೋಡಾ. ಹೆತ್ತವ್ವೆ ಮುತ್ತವ್ವೆಯ ನುಂಗಿ ಪರತತ್ವವನೆಯ್ದಿದಳು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.