Index   ವಚನ - 678    Search  
 
ಅಹಂ ಬ್ರಹ್ಮವೆಂದೆಂಬ ಜ್ಞಾನಹೀನನಾದ ವಾಗದ್ವೈತಿಯಲ್ಲ. ಅಹಂ ಭಿನ್ನವೆಂದೆಂಬ ದ್ವೈತ ಪಶುಮತವಲ್ಲ. ಸ್ವರ್ಗ ಮರ್ತ್ಯ ಪಾತಾಳದೊಳಗೆ ಶರಣ ಲಿಂಗ ಮತ ಬೇರೆ. ಈ ಶರಣ ಲಿಂಗದ ನಿಲುಕಡೆಯನು ಪರಶಿವಜ್ಞಾನಿಗಳು ಬಲ್ಲರಲ್ಲದೆ ಪ್ರಪಂಚ ಜೀವಿಗಳೆಂದೂ ಅರಿಯರು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.