Index   ವಚನ - 682    Search  
 
ಮಣ್ಣಿನಿಂದಾದ ಮಡಕೆ, ಚಿನ್ನದಿಂದಾದ ತೊಡಿಗೆ, ಕಂಚಿನಿಂದಾದ ತಳಿಗೆ, ಬಟ್ಟಲು, ಕಬ್ಬುನದಿಂದಾದ ಕೊಡಲಿ, ಕುಡನು ಮೊದಲಾದವರ ಕಾರ್ಯ ಕಾರಣಕ್ಕೆ ಭಿನ್ನವುಂಟೆ? ಇಲ್ಲವೆಂಬಂತೆ. ಮಹಾಲಿಂಗದಲ್ಲಿ ಜ್ಯೋತಿಯಿಂದ ಜ್ಯೋತಿ ಉದಯಿಸಿದಂತೆ ಉದಯಿಸಿದ ಶರಣಂಗೆ ಭಿನ್ನವೆಲ್ಲಿಯದೋ ಶರಣಂಗೂ ಲಿಂಗಕ್ಕೂ? ಅದ್ವೈತಾನಂದದಿಂದ ಸಂಪೂರ್ಣವನುಳ್ಳುದಲ್ಲದೆ ಅಲ್ಲಿ ಮತ್ತೊಂದು ಸಂದೇಹವುಂಟೆ? ಅಲ್ಲಿ ಸಂಶಯವ ಕಲ್ಪಿಸುವ ಮಾಯಾಭ್ರಾಂತರ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.