•  
  •  
  •  
  •  
Index   ವಚನ - 1429    Search  
 
ಮನ ಮುಕ್ತಿ ವಿವೇಕವೆಂಬ ಅಕ್ಕಿಯನು ಗುಪಿತವೆಂಬ ಒರಳೊಳಗಿಕ್ಕಿ ಅಭಿನ್ನಮಥನವೆಂಬ ಒನಕೆಯಲ್ಲಿ ಥಳಿಸಿ ಕಲ್ಮಷವೆಂಬ ತೌಡ ಹಾರಿಸಿ, ಸಮತೆಯೆಂಬ ಸಲಿಲದಲ್ಲಿ ಜಾಳಿಸಿ, ಅಳುಪು ಎಂಬ ಹರಳ ಕಳೆದು ದಯಾಮೃತವೆಂಬ ಹಾಲಿನಲ್ಲಿ ಬೋನವ ಮಾಡಿ, ಸಮರಸ ರುಚಿಕರದಿಂದ ಶಾಕಪಾಕಂಗಳಂ ಮಾಡಿ, ನೆನಹಿನ ಲವಲವಕಿಯೆ ಅಭಿಗಾರವಾಗಿ, ನಿರ್ಮಲವೆಂಬ ಶಿವದಾನವ ಗಡಣಿಸಿ ಕಾಯ್ದಿದ್ದರಯ್ಯಾ. ಪಂಚೇಂದ್ರಿಯವೆಂಬ ಸೊಣಗ ಮುಟ್ಟದಂತೆ ಕಾಯ್ದಿದ್ದರಯ್ಯಾ. ಷಡುವರ್ಗವೆಂಬ ತೊತ್ತಿರು ಮುಟ್ಟದಂತೆ ಕಾಯ್ದಿದ್ದರಯ್ಯಾ. ಅಷ್ಟಮದವೆಂಬ ಮಕ್ಕಳು ಮುಟ್ಟದಂತೆ ಕಾಯ್ದಿದ್ದರಯ್ಯಾ. ಇನಿತು ಮುಖ್ಯವಾದ ಹೀನಂಗಳಾವೂ ಮುಟ್ಟದಂತೆ ಕಾಯ್ದಿದ್ದರಾಗಿ, ಈ ಬೋನ ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು. ಕಾಣಾ ಚೆನ್ನಬಸವಣ್ಣಾ.
Transliteration Mana mukti vivēkavemba akkiyanu gupitavemba oraḷoḷagikki abhinnamathanavemba onakeyalli thaḷisi kalmaṣavemba tauḍa hārisi, samateyemba saliladalli jāḷisi, aḷupu emba haraḷa kaḷedu dayāmr̥tavemba hālinalli bōnava māḍi, samarasa rucikaradinda śākapākaṅgaḷaṁ māḍi, Nenahina lavalavakiye abhigāravāgi, nirmalavemba śivadānava gaḍaṇisi kāydiddarayyā. Pan̄cēndriyavemba soṇaga muṭṭadante kāydiddarayyā. Ṣaḍuvargavemba tottiru muṭṭadante kāydiddarayyā. Aṣṭamadavemba makkaḷu muṭṭadante kāydiddarayyā. Initu mukhyavāda hīnaṅgaḷāvū muṭṭadante kāydiddarāgi, ī bōna guhēśvaraliṅgakke arpitavāyittu. Kāṇā cennabasavaṇṇā.
Hindi Translation मन मुक्ति विवेक जैसे चावल को गुप्त जैसी ओखली में रख, अभिन्न मथन जैसे मूसल से कूटकर,कल्मष जैसे भूसा उडाकर, समता जैसे सलिल में छानकर,आशा जैसे कंकड मिटाकर दयामृत जैसे दूध में भोजन सिद्धकर, समरस रुचिकर से आशा पाकों को कर याद की लालसा का अभिघार बने, निर्मल जैसे मट्टा मिलाकर पहरा कर रहे थे। पंचेंद्रिय जैसा कुत्ता न छूनेजैसे पहरा दे रहे थे। षड्वर्ग जैस सेवक न छूने जैसे पहरा दे रहे थे। अष्टमद जैसे बच्चे न छूने जैसे पहरा देने से, ऐसे मुख्य बने बेकार कोई न छूने जैसे पहरा देने से, यह नैवेद्य गुहेश्वर लिंग को अर्पित हुआ था देख चेन्नबसवण्णा Translated by: Eswara Sharma M and Govindarao B N