Index   ವಚನ - 15    Search  
 
ನನ್ನಿಂದರಿದೆನೆಂಬೆನೆ ನನ್ನಿಂದರಿದವನಲ್ಲ. ನಿನ್ನಿಂದರಿದೆನೆಂಬೆನೆ ನಿನ್ನಿಂದರಿದವನಲ್ಲ. ಅದೇನು ಕಾರಣವೆಂದಡೆ, ಕಣ್ಣ ಬೆಳಗು ಸೂರ್ಯನ ಬೆಳಗು ಕೂಡಿ ಕಾಂಬಂತೆ, ನನ್ನ ನಿನ್ನರಿವಿನ ಸಂಬಂಧದ ಬೆಂಬಳಿಯಲ್ಲಿ ಅರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.