Index   ವಚನ - 16    Search  
 
ಅಯ್ಯಾ, ನಾನೀಜಗ ಹುಟ್ಟುವಂದು ಹುಟ್ಟಿದವನಲ್ಲ. ನಾನೀಜಗ ಬೆಳೆವಲ್ಲಿ ಬೆಳೆದವನಲ್ಲ. ನಾನೀಜಗವಳಿವಲ್ಲಿ ಅಳಿವವನಲ್ಲ. ಆಗು ಹೋಗಿನ ಜಗಕ್ಕೆ ಸಾಕ್ಷಿ ಚೈತನ್ಯನು, ನನ್ನಾಧಾರದಲ್ಲಿ ಜಗವಿದೆ. ಈ ಜಗದುತ್ಪತ್ತಿ ಸ್ಥಿತಿಲಯಕ್ಕೆ ನಾನಾಶ್ರಯನು. ಅಯ್ಯಾ, ನನಗೂ ನಿನಗೂ ಸಂಬಂಧವಲ್ಲದೆ ಜಗಕ್ಕೂ ಎನಗೂ ಸಂಬಂಧವಿಲ್ಲ. ನಾ ನಿಮ್ಮಲ್ಲಿ ಹುಟ್ಟಿದ ಕಾರಣ, ನಾ ನಿಮ್ಮಂತೆ ತೋರುವೆನು. ಜಗ ಮಾಯೆಯಲ್ಲಿ ಹುಟ್ಟಿದ ಕಾರಣ, ಜಗ ಮಾಯೆಯಂತೆ ತೋರುವುದು. ಅದು ಕಾರಣ ಈ ದೇಹೇಂದ್ರಿಯಾದಿಗಳು ನನ್ನವಲ್ಲ. ನಿನ್ನವಲ್ಲವೆಂದರಿದ ಕಾರಣ ಬೇರಾದವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.