Index   ವಚನ - 31    Search  
 
ಆವಾವ ಲೋಕದಲ್ಲಿರ್ದರೂ, ಆವಾವ ಪ್ರಕಾರದಲ್ಲಿ ಅವರವರಿಗೆ ತಕ್ಕ ಸಂಸಾರ ಬಿಡದು. ಹಿರಿದಿಂಗೆ ಹಿರಿದಾಗಿ, ಕಿರಿದಿಂಗೆ ಕಿರಿದಾಗಿ, ಕಾಡಿತ್ತು ಮಾಯೆ. ಘಟಸಂಸಾರಿಗಳಿಗೆಲ್ಲ ಘಟಭಾರವ ಹೊರಿಸಿ ಕಾಡಿತ್ತು ಮಾಯೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಮಾಯೆಯ ಬಲುಹಿಂಗೆ ನಾನು ಬೆರಗಾದೆನು.