Index   ವಚನ - 45    Search  
 
ಮರಹೆಂಬ ಕತ್ತಲೆಯೊಳಗೆ ತ್ರಿಜಗದ ಪ್ರಾಣಿಗಳೆಲ್ಲ ಹಿಂದುಗಾಣದೆ ಮುಂದುಗಾಣದೆ ಗೊಂದಣಗೊಳುತ್ತಿರ್ದರಲ್ಲ. ತಂದಿಕ್ಕಿದೆ ಬಲು ಮರವೆಯ ಶಿವನೇ, ನಿನ್ನ ಕಾಣದಂತೆ. ಈ ಅಂಧಕಾರದಲ್ಲಿರ್ದ ಪ್ರಾಣಿಗಳಿಗಿನ್ನೆಂದಿಂಗೆ ಮುಕ್ತಿಯಹುದೊ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?.