Index   ವಚನ - 49    Search  
 
ಮುನ್ನಲುಳ್ಳ ಕರ್ಮ ಬೆನ್ನ ಬಿಡದು ನೋಡಾ. ಜಾತಿ ವಿಜಾತಿಗಳಲ್ಲಿ ತೀವಿ ಭೋಗಕ್ಕೆ ಸಾಧನವಾದ ಪರಿಯ ನೋಡಾ. ಅಲ್ಲಿಯೆ ಮತ್ತೆ ಮತ್ತೆ ಪುಣ್ಯ ಪಾಪವ ಮಾಡಿ, ಸ್ವರ್ಗನರಕವನೈದುವ ಕರ್ಮಿಗಳು, ಕಣ್ಣುಗೆಟ್ಟು ಮುಂದುಗಾಣದೆ ಪುಣ್ಯ ಪಾಪವ ಬೆನ್ನಲ್ಲಿ ಕಟ್ಟಿ, ರಾಟಾಳದಂತೆ ತನುವ ತೊಡುತ್ತ ಬಿಡುತ್ತ ತಿರುಗುತ್ತಿಹರಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದ ಕರ್ಮಿಗಳ ನೋಡಾ.