Index   ವಚನ - 50    Search  
 
ಸಂಚಿತ ಪ್ರಾರಬ್ಧ ಆಗಾಮಿ ಎಂಬ ಕರ್ಮಂಗಳು ಬೆನ್ನ ಬಿಡವು ನೋಡಾ. ಆರನಾದರೂ ಮೂಗರಮಾಡಿ ಕಾಡಿ ಕೊಲುತ್ತಿಹವು ನೋಡಾ. ಹಿಂದೆ ಮಾಡಿದ ಕರ್ಮ ಬಿಡೆಂದಡೆ ಬಿಡುವುದೆ? ಮುಂದೆ ಉಂಡಲ್ಲದೆ ತೀರದು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ಕಡೆಗಣ್ಣಲ್ಲಿ ನೋಡುವನ್ನಕ್ಕ, ಕರ್ಮ ಉಂಡು ತೀರುವುದು.