Index   ವಚನ - 65    Search  
 
ಗುರುಹಸ್ತಸರೋಜಗರ್ಭ ಮಧ್ಯದಲ್ಲಿ ಹುಟ್ಟಿದ ಶಿಷ್ಯನೆಂಬ ಸತಿಯು, ಗುರುವಿನ ಸದ್ಭಾವಗರ್ಭ ಮಧ್ಯದಲ್ಲಿ ಹುಟ್ಟಿದ ಲಿಂಗವೆಂಬ ಪತಿಯು, ಸಹೋದರ ಸಂಬಂಧದಿಂದಿರ್ದರಾಗಿ, ಶರಣಸತಿ, ಲಿಂಗಪತಿಯಾದ ಪರಿಹೊಸತು. ಇದು ವಿಪರೀತ ನೋಡಾ. ಸತಿಪತಿಗಳಿಬ್ಬರೂ ಹೆತ್ತವರ ಕೊಂದು, ತಾವು ಸತ್ತರು. ಇವರು ಮೂವರು ಸತ್ತ ಠಾವನರಿದೆನೆಂದಡೆ ಆರಿಗೂ ಅಸದಳ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ಅವರು ಸತ್ತ ಠಾವ ನೀವೇ ಬಲ್ಲಿರಿ.