Index   ವಚನ - 66    Search  
 
ಹುಸಿಯಿಲ್ಲದ ಶಿಷ್ಯನು, ಮರಹಿಲ್ಲದ ಗುರುವಿನ ಪಾದವ ಹಿಡಿದಡೆ, ಕುರುಹಿಲ್ಲದ ಲಿಂಗವ ಕೊಡಲಿಕ್ಕಾಗಿ, ತೆರಹಿಲ್ಲದಪ್ಪಲೊಡನೆ ಬರಿದಾದವು ತನುಮನಪ್ರಾಣಂಗಳೆಲ್ಲವು. ಈ ಬೆಡಗಿನುಪದೇಶವ ಪಡೆದ ಶಿಷ್ಯನಲ್ಲಿ, ಗುರುವಡಗಿ ಗುರು ಶಿಷ್ಯನಾಗಿ, ಎರಡೂ ಒಂದಾದ ಪರಿಯನೇನೆಂದುಪಮಿಸುವೆನಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾದ ಗುರುಶಿಷ್ಯರ?.