Index   ವಚನ - 87    Search  
 
ಬ್ರಹ್ಮಕಲ್ಪಿತವಾದ ತ್ರಿಪುರನುರುಹಬೇಕೆಂದು, ಪರಮೇಶ್ವರನು ತ್ರಿಯಕ್ಷಿಯಿಂದ ನೋಡುತ್ತಿರಲು, ಆ ಮೂರು ನೇತ್ರಂಗಳಿಂದ ಉದಕದ ಬಿಂದುಗಳು, ಭೂಮಿಯ ಮೇಲೆ ಪತನವಾಗಲು, ಸರ್ವಾನುಗ್ರಹಾರ್ಥವಾಗಿ, ರುದ್ರಾಕ್ಷಿಯ ವೃಕ್ಷಂಗಳು ಹುಟ್ಟಿದವಂದು ನೋಡಾ. ಆ ರುದ್ರಾಕ್ಷಿಯ ವೃಕ್ಷದ ಬೀಜಂಗಳ ಧರಿಸಿದವರು, ಸ್ಮರಿಸಿದವರು, ಕೊಂಡಾಡಿದವರು, ರುದ್ರಾಕ್ಷಿಯಲ್ಲಿ ಜಪವ ಮಾಡಿದವರು, ಕೈವಲ್ಯವನಿತೆಗೆ ವಲ್ಲಭರಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ಸುಖ[ದಿಂ]ದಿಹರು ನೋಡಾ.