Index   ವಚನ - 88    Search  
 
ಬ್ರಾಹ್ಮಣ ಮೂರ್ಖ ಪಂಡಿತ ಬ್ರಹ್ಮಚಾರಿ ಗೃಹಸ್ಥ ವಾನಪ್ರಸ್ಥ ಯತಿಯಾದಡಾಗಲಿ, ಶ್ರೀರುದ್ರಾಕ್ಷಿಯನೊಲಿದು ಧರಿಸುವುದು ಕಾಣಿರಣ್ಣ. ಮತ್ತೆ, ಜಪಕಾಲದಲ್ಲಿ, ತಪಕಾಲದಲ್ಲಿ, ದೇವಪೂಜೆಯಲ್ಲಿ, ಶ್ರೀರುದ್ರಾಕ್ಷಿಯನೊಲಿದು ಧರಿಸುವುದು ಕಾಣಿರಣ್ಣ. ಈ ಶ್ರೀಮಹಾ ರುದ್ರಾಕ್ಷಿಯನೊಲಿದು ಧರಿಸಿದ ಮಹಾತ್ಮನು, ಹೆಜ್ಜೆ ಹೆಜ್ಜೆಗೆ ಅಶ್ವಮೇಧಶತಯಾಗದ ಫಲವ ಪಡೆದು, ಬಳಿಕ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ, ಸುಖದಿಹನು ಕಾಣಿರಣ್ಣ.