ಆರಾದರು ಆಗಲಿ,
ತಮ್ಮ ಕುಲ ಗೋತ್ರ ಜಾತಿ ಧರ್ಮ ಆಚಾರ ತಪ್ಪಿನಡೆದಡೆ,
ಅವರು ಅನಾಚಾರಿಗಳೆಂದು ಮುಖವ
ನೋಡಲೊಲ್ಲರು ನೋಡಾ.
ಇವರಿಂದಾ ಕಡೆಯೆ ಶಿವಭಕ್ತರಾದವರು?
ಭಕ್ತರಿಗೆ ನಡೆ ನುಡಿ ಸತ್ಯ ಶುದ್ಧ ಆಚಾರವಿರಬೇಕು.
ಅಂತಲ್ಲದೆ:
ಆಚಾರ ತಪ್ಪಿ ನಡೆದಡೆ, ನೀ ಮೆಚ್ಚೆಯೆಂದು ಅತಿಗಳೆವೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Art
Manuscript
Music
Courtesy:
Transliteration
Ārādaru āgali,
tam'ma kula gōtra jāti dharma ācāra tappinaḍedaḍe,
avaru anācārigaḷendu mukhava
nōḍalollaru nōḍā.
Ivarindā kaḍeye śivabhaktarādavaru?
Bhaktarige naḍe nuḍi satya śud'dha ācāravirabēku.
Antallade:
Ācāra tappi naḍedaḍe, nī mecceyendu atigaḷeve,
nijaguru svatantrasid'dhaliṅgēśvara.