ಕಾಯದ ಕಳವಳವ ಗೆಲಲರಿಯದವರು,
ಮಾಯಾಪಾಶದಲ್ಲಿ ಬಂಧವಡೆದ ಸಂಸಾರಿಗಳಹರಲ್ಲದೆ
ಅವರು ಜ್ಞಾನಿಗಳಾಗಲರಿಯರು.
ಅವರಿಗಿನ್ನೆಂದಿಂಗೆ ಮುಕ್ತಿಯಹುದೊ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?.
Art
Manuscript
Music
Courtesy:
Transliteration
Kāyada kaḷavaḷava gelalariyadavaru,
māyāpāśadalli bandhavaḍeda sansārigaḷaharallade
avaru jñānigaḷāgalariyaru.
Avariginnendiṅge muktiyahudo
nijaguru svatantrasid'dhaliṅgēśvara?.