ನಾನೆಲ್ಲಿಂದ ಬಂದೆ?
ಎನಗೆ ಈ ದೇಹ ಬಂದ ಪರಿ ಯಾವುದು?
ಇನ್ನು ಮುಂದೆ ಎಯ್ದುವ ಗತಿ ಯಾವುದು?
ಎಂಬ ನಿತ್ಯಾನಿತ್ಯವಿಚಾರ ಹುಟ್ಟದವರಿಗೆ ಎಂದೆಂದಿಗು
ಬಳಲಿಕೆ ಬಿಡದು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ,
ನೀವು ಬರಿಸಿದ ಭವಾಂತರದಲ್ಲಿ ಬರುತಿಹರಾಗಿ,
ನಾನು ಕಂಡು ಮರಗುತಿದ್ದೆನು.
Art
Manuscript
Music Courtesy:
Video
TransliterationNānellinda bande?
Enage ī dēha banda pari yāvudu?
Innu munde eyduva gati yāvudu?
Emba nityānityavicāra huṭṭadavarige endendigu
baḷalike biḍadu.
Nijaguru svatantrasid'dhaliṅgēśvara,
nīvu barisida bhavāntaradalli barutiharāgi,
nānu kaṇḍu maragutiddenu.