Index   ವಚನ - 123    Search  
 
ಜಾವ ಘಳಿಗೆಯ ನೇಮದ ಪೂಜೆಯ ನೇಮಕರೆಲ್ಲ, ಫಲದಾಯಕರಾಗಿ ಹೋದರು. ಲಿಂಗಭಕ್ತ ಕಾಲ ನೇಮದ ಪೂಜಾ ಫಲದಾಯಕನೆ ಅಲ್ಲಲ್ಲ. ಲಿಂಗಭಕ್ತ ಮಾಡುವ ಪೂಜೆ ನಿರ್ಮಲ್ಯವಾಗದು, ತಾ ಸಹಿತ ಲಿಂಗಕ್ಕೆ ಪೂಜೆಯಹನಾಗಿ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ನಿಜಭಕ್ತ ಮಾಡುವ ಪೂಜೆಯ ಕ್ರಮವಿದು.