Index   ವಚನ - 125    Search  
 
ಶಿವಪ್ರಸಾದವನಲ್ಲದೆ ಕೊಳ್ಳನಾ ಭಕ್ತನು. ಶಿವನಿರ್ಮಾಲ್ಯವನಲ್ಲದೆ ಗ್ರಹಿಸನಾ ಭಕ್ತನು. ಶಿವನನಲ್ಲದೆ ನೆನೆಯನಾ ಭಕ್ತನು. ಶಿವಕಾರ್ಯವನಲ್ಲದೆ ಮಾಡನಾ ಭಕ್ತನು. ಶಿವನವರನಲ್ಲದೆ ನಂಬನಾ ಭಕ್ತನು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಭಕ್ತನ ಚಾರಿತ್ರವಿದು.