Index   ವಚನ - 127    Search  
 
ಷಡಧ್ವಾಶ್ರಯವಾವ ಪರಬಿಂದುಸ್ಥಾನದ ಮೇಲಿರ್ದ ಷಡುಸ್ಥಲಮೂಲವಾದ ಪರಶಿವತತ್ವದೊಳು, ಷಡುಸ್ಥಲಲಿಂಗಾಂಗ ಜನಿಸಿ ತೋರಿತೆಂದಡೆ ಅಂಗ ಲಿಂಗಕ್ಕೆ ಭೇದವುಂಟೆ? ಇಲ್ಲದಾಗಿ. ಬೀಜಾಂಕುರದಂತೆ ಒಂದ ಬಿಟ್ಟು ಒಂದು ತೋರದು. ಇಂತಪ್ಪ ಲಿಂಗಾಂಗ ಸಂಬಂಧ ಸಕೀಲವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಶರಣ ಬಲ್ಲನು.