Index   ವಚನ - 133    Search  
 
ಭಕ್ತನ ಕಾಯವೆ ಶಿವನ ಕಾಯ, ಶಿವನ ಕಾಯವೆ ಭಕ್ತನ ಕಾಯ. ಶಿವ ಶಿವ, ಭಕ್ತ ಬೇರೆಯೆ? ಶಿವ ಬೇರೆಯೆ? ಒಂದೆ ಕಾಣಿರಯ್ಯ. ಅದೆಂತೆಂದಡೆ. `ಭಕ್ತ ದೇಹಿಕ ದೇವ, ದೇಹಿಕ ಭಕ್ತ' ಎಂದು ಶ್ರುತಿ ಹೊಗಳುವ ಕಾರಣ, ಭಕ್ತಂಗೂ ದೇವಂಗೂ ಕಾಯವೊಂದೆ, ಪ್ರಾಣವೊಂದೇ. ಎರಡೆಂಬ ಪರಿಭಾಷೆಯ ನುಡಿಯಲಾಗದು ಭಕ್ತರಾದವರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.