ಎಲೆ ಶಿವನೆ, ನಾ ನಿಮ್ಮನೊಂದೆ ಬೇಡಿಕೊಂಬೆನು:
ನಿಮ್ಮ ಶರಣರ ಮೂರ್ತಿಯ ಕಂಡಡೆ,
ನೀವೆಂದೆ ಕಾಬಂತೆ ಮಾಡಯ್ಯ.
ನಿಮ್ಮ ಶರಣರ ನುಡಿಯ ಕೇಳಿದಡೆ,
ನಿಮ್ಮ ನುಡಿಯೆಂದು ನಂಬುವಂತೆ ಮಾಡಯ್ಯ.
ನಿಮ್ಮ ಶರಣರ ಸುಖವೆಲ್ಲ,
ನಿಮ್ಮ ಸುಖವೆಂದು ತಿಳಿವಂತೆ ಮಾಡಯ್ಯ.
ನಿಮ್ಮ ಶರಣರಾಡಿದ್ದೆಲ್ಲ,
ನಿಮ್ಮ ಲೀಲೆಯೆಂದರಿವಂತೆ ಮಾಡಯ್ಯಾ ಎನಗೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.