Index   ವಚನ - 149    Search  
 
ಏನೆಂದರಿಯರು, ಎಂತೆಂದರಿಯರು, ಹಗರಣದ ಹಬ್ಬಕ್ಕೆ ಜಗದ ಜನರೆಲ್ಲ ನೆರೆದು, ಗೊಂದಣಗೊಳುತ್ತಿದ್ದರಲ್ಲ. ತ್ರಿಭಂಗಿಯ ತಿಂದು, ಅದು ತಲೆಗೇರಿ ಗುರುವೆಂದರಿಯರು, ಲಿಂಗವೆಂದರಿಯರು, ಜಂಗಮವೆಂದರಿಯರು. ಶಿವ ಶಿವಾ, ಮಾಯಾಜಾಲದಲ್ಲಿ ಸಿಕ್ಕಿದ ಮರುಳು ಜನರು, ಮುಕ್ಕಣ್ಣನಿಕ್ಕಿದ ಛತ್ರದಲುಂಡು ಸೊಕ್ಕಿ, ಸಲಹುವ ಕರ್ತನನರಿಯದವರಿಗೆನ್ನೆತ್ತಣ ಮುಕ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?