ನಿಜವನರಿದು ನಿರ್ಮಲ ಜ್ಞಾನಿಯಾದ ಕರ್ಮರಹಿತ ಶಿವಯೋಗಿ
ಕರ್ಮಕಾಯನಲ್ಲ. ಕರ್ಮಭೋಗಿಯಲ್ಲ.
ಕರ್ಮಾಧೀನನು ತಾ ಮುನ್ನವೆ ಅಲ್ಲ.
ಅದೆಂತೆಂದಡೆ,
ಪರಿಪಕ್ವವಾದ ಹಣ್ಣು ರಸ ತುಂಬಿ ತೊಟ್ಟು ಕಳೆದ ಬಳಿಕ,
ಮರಳಿ ವೃಕ್ಷವನಡರಿ, ತೊಟ್ಟು ಹತ್ತುವುದೇ ಹೇಳ?
ಆಗಾಮಿ ಪರಿಪಕ್ವವಾಗಿ ಸಂಚಿತವಾಯಿತ್ತು.
ಸಂಚಿತ ಪರಿಪಕ್ವವಾಗಿ ಪ್ರಾರಬ್ಧವಾಯಿತ್ತು.
ಪ್ರಾರಬ್ಧ ಪರಿಪಕ್ವವಾಗಲು ತ್ರಿವಿಧ ಕರ್ಮನಾಸ್ತಿಯಾಯಿತ್ತು.
ಇದ್ದು ಕರ್ಮವುಂಟೆ? ಇಲ್ಲವಾಗಿ.
``ಯಥಾ ವೃಕ್ಷಫಲಂ ವೃಕ್ಷಾತ್ ಪತನಂ ಲಭತೇ ಸ್ವತಃ|
ತಥಾ ಸರ್ವಾಣಿ ಕರ್ಮಾಣಿ ಪತಂತಿ ಶಿವಯೋಗಿನಾಂ"
ಎಂದುದಾಗಿ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಶರಣರು ಕರ್ಮರಹಿತರು.
Art
Manuscript
Music
Courtesy:
Transliteration
Nijavanaridu nirmala jñāniyāda karmarahita śivayōgi
karmakāyanalla. Karmabhōgiyalla.
Karmādhīnanu tā munnave alla.
Adentendaḍe,
paripakvavāda haṇṇu rasa tumbi toṭṭu kaḷeda baḷika,
maraḷi vr̥kṣavanaḍari, toṭṭu hattuvudē hēḷa?
Āgāmi paripakvavāgi san̄citavāyittu.
San̄cita paripakvavāgi prārabdhavāyittu.
Prārabdha paripakvavāgalu trividha karmanāstiyāyittu.
ddu karmavuṇṭe? Illavāgi.
``Yathā vr̥kṣaphalaṁ vr̥kṣāt patanaṁ labhatē svataḥ|
tathā sarvāṇi karmāṇi patanti śivayōgināṁ
endudāgi
nijaguru svatantrasid'dhaliṅgēśvarana
śaraṇaru karmarahitaru.