ಶಿವಲಿಂಗ ಪೂಜೆಯಿಂದ ಭಕ್ತಿ ದೊರಕೊಂಬುದು,
ಮುಕ್ತಿ ದೊರಕೊಂಬುದು.
ಶಿವಲಿಂಗಪೂಜೆಗೆ ಸರಿಯೊಂದಿಲ್ಲವೆಂದು,
ಪುರಾತನರು ಶಿವಲಿಂಗಪೂಜೆಯ
ಮಾಡಿ ಶಿವನೊಳಗಾದರು.
ಇದನರಿದು ಮತ್ತೇಕೆ ಮರೆವಿರಿ,
ಮರುಳು ಮಾನವರುಗಳಿರ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಪೂಜೆಯ ಮಾಡಿ ಬದುಕಿರಣ್ಣಾ.
Art
Manuscript
Music
Courtesy:
Transliteration
Śivaliṅga pūjeyinda bhakti dorakombudu,
mukti dorakombudu.
Śivaliṅgapūjege sariyondillavendu,
purātanaru śivaliṅgapūjeya
māḍi śivanoḷagādaru.
Idanaridu mattēke mareviri,
maruḷu mānavarugaḷira?
Nijaguru svatantrasid'dhaliṅgēśvarana
pūjeya māḍi badukiraṇṇā.