Index   ವಚನ - 162    Search  
 
ಲಿಂಗದ ಕಲೆಯನರಿದಲ್ಲದೆ ಭಕ್ತಿ ವಿರಕ್ತಿಯೆಂಬವು ದೊರಕೊಳ್ಳವು ನೋಡಾ. ಲಿಂಗದ ಕಲೆಯನರಿದಲ್ಲದೆ ಜ್ಞಾನ ಆನಂದವು ದೊರಕೊಳ್ಳವು ನೋಡಾ. ಲಿಂಗದ ಕಲೆಯನರಿದಲ್ಲದೆ ಕ್ಷಮೆ ದಮೆ ಸಮತೆ ಸದಾಚಾರಂಗಳು ದೊರಕೊಳ್ಳವು ನೋಡಾ. ಲಿಂಗದ ಕಲೆಯನರಿದಲ್ಲದೆ ಸದ್ಗುಣ ಗಣ ವಿನಯ ಮೃದುವಚನ ದೊರಕೊಳ್ಳವು ನೋಡಾ. ಇಂತನಂತ ಗುಣವಿಲ್ಲದಡೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಲಿಂಗವನರಿದುದಕ್ಕೆ, ಚಿಹ್ನವಲ್ಲ ನೋಡಾ.