Index   ವಚನ - 190    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮನೆಂಬ ಅಷ್ಟತನುಗಳಲ್ಲಿ, ಶಿವನಧಿಷ್ಠಾತೃವಾದನೆಂದಡೆ ಅಷ್ಟತನುಗಳು ಶಿವನಾಗಲರಿಯವು. ಮತ್ತೆ, ಶಿವನ ಬಿಟ್ಟು ಬೇರೆ ತೋರಲರಿಯವು. ಅಷ್ಟತನುಗಳೆಲ್ಲ ಸೋಪಾಧಿಕವಲ್ಲದೆ ನಿಜತನುವಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಂಗೆ. ಅಷ್ಟತನುಮೂರ್ತಿಯೆಂಬುದುಪಚಾರವು.