Index   ವಚನ - 203    Search  
 
ಶಿವ ತನ್ನ ಶಕ್ತಿಯಿಂದ ಜಗವನಧಿಷ್ಠಿಸಿ ತೊಲಗದೆ, ಅಚಲವಾಗಿ ಜಗವ ಸೋಂಕಿದ್ದು ತಾನಾ ಜಗದಂತಲ್ಲದೆ, ತನ್ನ ಶಕ್ತಿಯಿಂದ ಪರಮನಿರ್ಮಲನಾಗಿ, ಜಗದಂತರ್ಯಾಮಿಯಾದ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.