Index   ವಚನ - 204    Search  
 
ಹಲವು ತೃಣ ಕಾಷ್ಠಗಳಲ್ಲಿ ಅಗ್ನಿ ಬೆರಸಿದಿರ್ದಂತೆ, ಹಲವು ಘಟಜಲದಲ್ಲಿ ಸೂರ್ಯ ಬಿಂಬಿಸುತ್ತಿರ್ದಂತೆ, ಇಪ್ಪನಯ್ಯ ಶಿವನು ಸಕಲ ಜೀವರ ಹೃದಯದಲ್ಲಿ. ಬೆರಸಿಯೂ ಬೆರಸದಂತಿಪ್ಪನಯ್ಯಾ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.