ಅನುಭಾವವ ನುಡಿವ ಅಣ್ಣಗಳಿರಾ,
ಅನುಭಾವವೆತ್ತ ನೀವೆತ್ತ ಹೋಗಿರಣ್ಣ.
ಅನುಭಾವವೆಂಬುದು ಆತ್ಮವಿದ್ಯೆ.
ಅನುಭಾವವೆಂಬುದು ತಾನಾರೆಂಬುದ ತೋರುವುದು.
ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು.
ಇಂತಪ್ಪ ಅನುಭಾವದನುವನರಿಯದೆ
ಶಾಸ್ತ್ರಜಾಲದ ಪಸರವನಿಕ್ಕಿ
ಕೊಳ್ಳದೆ ಕೊಡದೆ ವ್ಯವಹಾರವ ಮಾಡುವ ಅಣ್ಣಗಳಿರಾ,
ನೀವೆತ್ತ?, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಅನುಭಾವವೆತ್ತ?
Art
Manuscript
Music
Courtesy:
Transliteration
Anubhāvava nuḍiva aṇṇagaḷirā,
anubhāvavetta nīvetta hōgiraṇṇa.
Anubhāvavembudu ātmavidye.
Anubhāvavembudu tānārembuda tōruvudu.
Anubhāvavembudu nijanivāsadallirisuvudu.
Intappa anubhāvadanuvanariyade
śāstrajālada pasaravanikki
koḷḷade koḍade vyavahārava māḍuva aṇṇagaḷirā,
nīvetta?, Nijaguru svatantrasid'dhaliṅgēśvarana
anubhāvavetta?