Index   ವಚನ - 245    Search  
 
ನಡೆವ ಬಟ್ಟೆಯ ಬಿಡಿಸಿ, ನಡೆಯದೆ ಬಟ್ಟೆಯಲ್ಲಿ ನಡೆವಂತೆ ಮಾಡಿದನಯ್ಯ. ನೋಡುವ ನೋಟವ ಬಿಡಿಸಿ, ನೋಡುದುದ ನೋಡುವಂತೆ ಮಾಡಿದನಯ್ಯ. ಕೇಳುವುದ ಕೇಳಲೀಯದೆ ಬಿಡಿಸಿ, ಕೇಳುದದ ಕೇಳುವಂತೆ ಮಾಡಿದನಯ್ಯ. ಕೂಡಬಾರದ ಘನವ ಕೂಡುವಂತೆ ಮಾಡಿ ಪರಮಸುಖದೊಳಗಿರಿಸಿದನಯ್ಯಾ, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.