Index   ವಚನ - 249    Search  
 
ಮೂರಾಧಾರ ಮಧ್ಯದಲ್ಲಿ ಹುಟ್ಟಿದ ಪ್ರಾಣಾಪಾನಂಗಳು ಆವಲ್ಲಿ ಮನ ಸಹಿತ ಲಯವಾದವೊ ಆ ಲಯ ಕಾರಣವಾದುದು ಪ್ರಾಣಲಿಂಗ. ಆ ಪ್ರಾಣಲಿಂಗದ ನೆಲೆಯನರಿಯದೆ ಏನ ಮಾಡಿದಡೂ ಫಲದಾಯಕ ಭಕ್ತಿಯಲ್ಲದೆ ಮುಕ್ತಿಯಿಲ್ಲ. ಇದು ಕಾರಣ. ಪ್ರಾಣಲಿಂಗವನರಿದು, ಮನ ಶಕ್ತಿ ಸಂಯೋಗವ ಮಾಡಿ ಮುಕ್ತರಹುದಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.