ವಚನ - 1455     
 
ಮೂರು ಲೋಕದ ಧೀರೆ ನಿದ್ರಾಂಗನೆ, ಎಲ್ಲರನೂ ಹಿಂಡಿ ಹೀರಿ ಪ್ರಾಣಾಕರ್ಷಣೆಯ ಮಾಡಿ, ಕಟ್ಟಿ ಕೆಡಹಿದಳಲ್ಲಾ! ಇವಳ ಗೆಲುವ ಧೀರನಾರುವನೂ ಕಾಣೆ. ಇವಳ ಬಾಣಕ್ಕೆ ಗುರಿಯಾಗಿ ಏಳುತ್ತ ಬೀಳುತ್ತಲಿದ್ದರು ಎಲ್ಲರೂ-ಗುಹೇಶ್ವರಾ.