Index   ವಚನ - 262    Search  
 
ಏಳುನೆಲೆಯಲ್ಲಿ ಹೂಳಿದ ನಿಧಾನವ ಸಾಧಿಸಹೋದರೆ ಸಾಧಕನನದು ನುಂಗಿತ್ತು ನೋಡಾ. ಸಾಧಿಸಹೋದ ಕಲಿಗಳೆಲ್ಲಾ ನಿಧಾನವ ಸಾಧಿಸಹೋಗಿ ತಾವೆ ನಿಧಾನಕ್ಕೆ ಬಲಿಯಾದರು. ಬಲ್ಲಿದರೆಲ್ಲರ ನುಂಗಿ, ಬಡವರನುಳುಹಿತ್ತು. ಇಂತಪ್ಪ ನಿಧಾನವ ಕಂಡರಿಯೆವು, ಕೇಳಿ ಅರಿಯೆವು ಎಂದು ಸಾಧಕನೊಡನಿದ್ದ ಸಾಹಸಿಗಳೆಲ್ಲಾ ಬೆರಗಾಗಿ ನಿಂದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ನಿಧಾನವ ಸಾಧಿಸಿ ನಾನು ಬದುಕಿದೆನು.