Index   ವಚನ - 263    Search  
 
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಅಜ್ಞೇಯವೆಂಬಷಡಾಧಾರ ಚಕ್ರಂಗಳಲ್ಲಿ ವರ್ಣ ದಳ ಅಕ್ಷರ ಅಧಿದೇವತೆಯರಲ್ಲಿ ಕೂಡಿ ತೋರುವ ವಸ್ತು ಒಂದಲ್ಲದೆ ಹಲವುಂಟೆ? ಚಕ್ರಚಕ್ರದಲ್ಲಿ ಲೆಕ್ಕಕ್ಕೆ ಒಳಗಾಗಿ, ನಾಮರೂಪಿಗೆ ಬಂದುಸಿಕ್ಕಿದೆಯಲ್ಲ! ಯೋಗಿಗಳ ಮನದಲ್ಲಿ ಲಕ್ಷ್ಯವಿಲ್ಲದ ನಿರ್ಲಕ್ಷ್ಯನೀನು ಲಕ್ಷ್ಯಕ್ಕೆ ಬಂದ ಪರಿಯೇನು ಹೇಳ? ಕಾಣಬಾರದ ವಸ್ತುವ ಕಾಣಿಸಿ ಹಿಡಿದರು ಶರಣರು. ಭೇದಿಸಬಾರದ ವಸ್ತುವ ಭೇದಿಸಿ ಕಂಡರು. ಸಾಧಿಸಬಾರದ ವಸ್ತುವ ಸಾಧಿಸಿ ಕಂಡರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣರು.