Index   ವಚನ - 277    Search  
 
ಗರುಡನ ಗರಿಯ ಮುರಿದು, ಉರಗನ ಸಪ್ತ ಡೊಂಕ ತಿದ್ದಿ, ಅಷ್ಟಪ್ರಕೃತಿ ಗುಣವ ನಷ್ಟವ ಮಾಡಿ, ಕುಂಡಲಿಯನಂಡಲೆದು, ಬಲಿದೆತ್ತಿ ಮಧ್ಯಮಾರ್ಗದಲ್ಲಿ ನಡೆಸಿ, ಊರ್ಧ್ವಸ್ಥಾನದಲ್ಲಿ ನಿಲಿಸಿದಡೆ, ಒಂದು ಮಾತು ಕೇಳಬಹುದು. ಆ ಮಾತಿನ ಬೆಂಬಳಿಯಲ್ಲಿ; ಜ್ಯೋತಿರ್ಲಿಂಗವ ಕಂಡು ಕೂಡಿದರು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.